Thursday, December 12, 2024
Homeಜಿಲ್ಲೆತುಮಕೂರುSri Siddaganga Math | ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಬಂತು ಮಹತ್ವದ ಸಂದೇಶ..?

Sri Siddaganga Math | ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಬಂತು ಮಹತ್ವದ ಸಂದೇಶ..?

ತುಮಕೂರು | ಲಕ್ಷಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹವನ್ನು ನೀಡುವ ಮೂಲಕ ಪ್ರಸಿದ್ದಿಯನ್ನು ಪಡೆದುಕೊಂಡಿರುವುದು ತುಮಕೂರು ನಗರದಲ್ಲಿರುವ ಶ್ರೀ ಸಿದ್ಧಗಂಗಾ ಮಠ (Sri Siddaganga Math). ಸುಮಾರು 10 ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದು ಪ್ರಾಥಮಿಕ ಶಾಲೆಯಿಂದ ಪದವಿ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದಾರೆ.

ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಹಾಯದಿಂದ ಉದಾರ ದಾನಿಗಳಿಂದ ಸಿದ್ದಗಂಗಾ ಮಠವು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಗ್ಗೆ ಸಿದ್ಧಗಂಗಾ ಮಠ ಹೆಮ್ಮೆ ಮತ್ತು ಸಂತಸವನ್ನು ವ್ಯಕ್ತಪಡಿಸುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಸಿದ್ದಗಂಗಾ ಮಠದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಶ್ರೀಮಠದ ಭಕ್ತರು, ಹಳೆಯ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಶ್ರೀ ಸಿದ್ದಗಂಗಾ ಮಠ ತಿಳಿಸಿದೆ.

ಸಾರ್ವಜನಿಕರು ಹಳೆಯ ವಿದ್ಯಾರ್ಥಿಗಳಿಂದ ಮತ್ತು ಹಿತೈಷಿಗಳಿಂದ  ದೇಣಿಗೆ ಸಂಗ್ರಹ ಮಾಡಲು, ಬಂಜೆತನಕ್ಕೆ ಔಷಧಿ ವಿತರಣೆ ಮಾಡಲು ತಮ್ಮನ್ನು ನಿಯೋಜಿಸಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಕೆಲವರು ದೇಣಿಗೆ ಸಂಗ್ರಹ ಮಾಡುತ್ತಿರುವ ಹಾಗೂ ಔಷಧಿ ವಿತರಿಸುತ್ತಿರುವ ವಿಷಯ ಸಂಸ್ಥೆಯ ಗಮನಕ್ಕೆ ಬಂದಿದೆ.

ಶ್ರೀಮಠದಿಂದ ಬಂಜತನಕ್ಕೆ ಔಷಧಿ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹ ಮಾಡಲು ಯಾವುದೇ ವ್ಯಕ್ತಿಯನ್ನು ನಿಯೋಜನೆ ಮಾಡಿಲ್ಲ ಮತ್ತು ನೇಮಕ ಕೂಡ ಮಾಡಿಲ್ಲ. ಸಾರ್ವಜನಿಕರು ಮೋಸ ಹೋಗಬಾರದೆಂದು ಶ್ರೀಮಠದ ಆಡಳಿತಾಧಿಕಾರಿ ಎಸ್ ವಿಶ್ವನಾಥ್ ತಿಳಿಸಿದ್ದಾರೆ.

ಇನ್ನೂ ಸಾರ್ವಜನಿಕರು ಹಳೆಯ ವಿದ್ಯಾರ್ಥಿಗಳು, ಹಿತೈಷಿಗಳು, ಶ್ರೀಮಠಕ್ಕೆ ನೇರವಾಗಿ, ಅಂಚೆಯ ಮುಖಾಂತರ ಅಥವಾ ಬ್ಯಾಂಕ್ ಖಾತೆಯ ಮೂಲಕವಾಗಿ ದೇಣಿಗೆಯನ್ನು ಸಲ್ಲಿಸಬಹುದಾಗಿದೆ. ಹೀಗಾಗಿ ಯಾವುದೇ ವಂಚಕರ ಮಾತಿಗೆ ಬಲಿಯಾಗಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments