ಬೆಳಗಾವಿ | ಕುಣಿಗಲ್, ಮಾಗಡಿ ಪಟ್ಟಣಕ್ಕೆ ಲಿಂಕ್ ಕೆನಲ್ (Hemavati Link Canal Project) ಮೂಲಕ ಹೇಮಾವತಿ ನೀರು ಕೊಂಡೊಯ್ಯಲು ತುಮಕೂರು ಜನಪ್ರತಿನಿಧಿಗಳ ತೀವ್ರ ವಿರೋಧದ ಬಗ್ಗೆ ಇದೀಗ ಕುಣಿಗಲ್ ಶಾಸಕ ಡಾ. ರಂಗನಾಥ್ ತುಟಿ ಬಿಚ್ಚಿದ್ದಾರೆ.
ಬಿಜೆಪಿ-ಜೆಡಿಎಸ್ ಶಾಸಕರಿಗೆ ಶಾಸಕ ಡಾ.ರಂಗನಾಥ್ ಸವಾಲು ಹಾಕಿದ್ದು, ಕುಣಿಗಲ್‌ಗೆ ಲಿಂಕ್ ಕೆನಲ್ ಮೂಲಕ ನೀರನ್ನ ಕೊಂಡೊಯ್ಯವುದು ಖಚಿತ ಇದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಷ್ಟೆಲ್ಲಾ ಹೋರಾಟ ಮಾಡುವ ಬಿಜೆಪಿ-ಜೆಡಿಎಸ್ ನಾಯಕರು ಕಾವೇರಿ ಕೊಳ್ಳದಿಂದ ಕೃಷ್ಣ ಕೊಳ್ಳಕ್ಕೆ ಹೇಮಾವತಿ ನೀರನ್ನು ಕೊಂಡೊಯ್ಯುವಾಗ ಇವರ ಗಂಡಸ್ತನ ಎಲ್ಲೋಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಡಿಸಿಎಂ ಡಿ. ಕೆ ಶಿವಕುಮಾರ್ ಬಗ್ಗೆ ತುಮಕೂರಿನ ಶಾಸಕರೊಬ್ಬರು ಲಘುವಾಗಿ ಮಾತನಾಡಿದ್ದಾರೆ. ಹುಷಾರ್.. ಇದೇ ರೀತಿ ಮುಂದುವರೆಸಿದ್ರೆ ಸರಿ ಇರಲ್ಲ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.