ತುಮಕೂರು | ತುಮಕೂರಿನ (Tumkur) ರಿಂಗ್ ರಸ್ತೆಯಿಂದ ಗಂಗಸಂದ್ರ ಗ್ರಾಮದವರೆಗೆ (Gangasandra village) ಇತ್ತೀಚೆಗೆ ಹೊಸದಾಗಿ ಡಾಂಬರಿಕರಣ ರಸ್ತೆ ಮಾಡಲಾಗಿದೆ. ಆದರೆ ಈ ಹಿಂದೆ ಬಾಕ್ಸ್ ಚರಂಡಿ (drain) ಮಾಡುವ ಸಂದರ್ಭದಲ್ಲಿ ಈ ರಸ್ತೆಯ ಅಕ್ಕ ಪಕ್ಕದ ಜಮೀನ್ದಾರರಿಗೆ ಪರಿಹಾರ ನೀಡದ ಹಿನ್ನಲೆ ಚರಂಡಿ ಮಾಡಲು ಜಾಗ ಬಿಟ್ಟಿರುವುದಿಲ್ಲ ಹೀಗಾಗಿ ಸಮಸ್ಯೆಯೊಂದು ತಲೆದೋರಿದೆ.
ಹೌದು,, ಈ ರಸ್ತೆಯಲ್ಲಿ ತುಮಕೂರಿನ ಪಿ.ಡಬ್ಲ್ಯೂ. ಡಿ. ವಿಭಾಗವು ಹೊಸದಾಗಿ ಡಾಂಬರ್ ರಸ್ತೆಯನ್ನು ಮಾಡಿದ್ದು, ಈ ರಸ್ತೆಯ ಅಲ್ಲಲ್ಲಿ ಮಳೆ ನೀರು ಸರಾಗವಾಗಿ ಚರಂಡಿಗೆ ಹೋಗದೆ ಡಾಂಬರ್ ರಸ್ತೆಯ ಮೇಲೆ ನಿಲ್ಲುತ್ತದೆ. ಈ ಕಾರಣದಿಂದ ರಸ್ತೆಯು ಅತಿ ಶೀಘ್ರದಲ್ಲಿ ಹಾಳಾಗುವ ಸಂಭವ ಇರುತ್ತದೆ.
ಸಂಬಂಧಿಸಿದ ಇಲಾಖೆಯು ಸ್ಥಳ ಪರಿಶೀಲಿಸಿ, ನೀರು ಸರಗಾಗಿ ಚರಂಡಿಗೆ ಹೋಗುವಂತೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ಡಾಂಬರ್ ರಸ್ತೆ ಹಾಳಾಗದಂತೆ ಕ್ರಮವಹಿಸಲು ಕಲ್ಪತರು ಬಡಾವಣೆಯ ನಾಗರಿಕರು ಈ ಮೂಲಕ ಆಗ್ರಹಿಸಿದ್ದಾರೆ.