ತುಮಕೂರು | ಟಾಸ್ಕ್ ಹೆಸರಿನಲ್ಲಿ ಸುಮಾರು 20 ಲಕ್ಷಕ್ಕಿಂತ (20 lakhs) ಅಧಿಕ ಮೊತ್ತದ ಹಣವನ್ನು (Money) ವಂಚನೆ ಮಾಡಿದ್ದ ಅಂತರ ರಾಜ್ಯ ಸೈಬರ್ ಆರೋಪಿಗಳನ್ನು (Interstate cyber accused) ತುಮಕೂರು ಪೊಲೀಸರು (Tumkur Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Tumkur Police | ಮಧ್ಯರಾತ್ರಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ..! – karnataka360.in
ಘಟನೆಯ ವಿವರ
ತುಮಕೂರು ಜಿಲ್ಲೆಯ ತಿಪಟೂರು (Tipatur) ನಗರದ ನಿವಾಸಿ ಶ್ರೀಮತಿ ಅನುಷ (Anusha) ಅವರನ್ನು ಡಿಸೆಂಬರ್ 22 2023 ರಂದು ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಮೂಲಕ ಸಂಪರ್ಕಿಸಿ ಟಾಸ್ಕ್ ಹೆಸರಿನಲ್ಲಿ ಪ್ರಾಪರ್ಟಿ ಮೇಲೆ ರಿವ್ಯೂಸ್ ನೀಡಿದಲ್ಲಿ ಹೆಚ್ಚಿನ ಹಣ ಕೊಡುವುದಾಗಿ ಆಮೀಷ ನೀಡಿದ್ದರು. ಅನುಷಾ ಅವರಿಂದ ಹಂತ ಹಂತವಾಗಿ ಆರೋಪಿಗಳು 20,76,182 ರೂಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ನಂತರ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದರು.
ಮೋಸ ಹೋದ ಶ್ರೀಮತಿ ಅನುಷ ಅವರು ಸಿಇಎಂ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಅವರು ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.
ಇದೀಗ ಮೂಲತಹ ಆಂಧ್ರಪ್ರದೇಶ ರಾಜ್ಯದವರಾದ ದಾಸಿನೇನಿ ಜಗದೀಶ್ (24), ಸಂತೋಷ್ (24), ಕಾರವೇಟಿ ನಗರಂ ಮುನೀಂದ್ರ (31) ಮತ್ತು ವಂಕಯಾಲ ಸುರೇಶ್ (28) ಎಂಬ ನಾಲ್ವರು ಆರೋಪಿಗಳನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು, ಸಿಮ್ ಕಾರ್ಡ್ ಗಳು, ಪಾಸ್ ಪುಸ್ತಕಗಳು, ಚೆಕ್ ಬುಕ್ ಗಳು, ಬ್ಯಾಂಕ್ ಖಾತೆಯನ್ನು ತೆರೆಯಲು ಬಳಸಿದ್ದ ನಕಲಿ ಸೀಲುಗಳನ್ನು ಅಮಾನತು ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ರವರು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಜೊತೆಗೆ ಆರೋಪಿಗಳನ್ನು ಬಂಧಿಸಿದ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.