Sunday, December 15, 2024
Homeಜಿಲ್ಲೆತುಮಕೂರುTumkur Police | ಮಧ್ಯರಾತ್ರಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ..!

Tumkur Police | ಮಧ್ಯರಾತ್ರಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ..!

ತುಮಕೂರು | ಮಧ್ಯರಾತ್ರಿ ವ್ಯಕ್ತಿಯನ್ನು ಅಡ್ಡಗಟ್ಟಿ ಆತನ ಬಳಿ ಇದ್ದ ಮೊಬೈಲ್ (Mobile), ಹಣ ಹಾಗೂ ಬೈಕ್ ಅನ್ನು ಕಳ್ಳತನ (Theft) ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ತುಮಕೂರು (Tumkur) ಗ್ರಾಮಾಂತರ ಪೊಲೀಸರು (Police) ಬಂಧಿಸಿದ್ದಾರೆ.

Lok Sabha Elections | ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆದ 4 ಅಭ್ಯರ್ಥಿಗಳು..! – karnataka360.in

ಘಟನೆಯ ವಿವರ

ಮಾರ್ಚ್ 27ರ ಮಧ್ಯರಾತ್ರಿ 12:45ರ ವೇಳೆಯಲ್ಲಿ ಹೆಗ್ಗೆರೆ ಗ್ರಾಮದ ನಿವಾಸಿಯಾದ ಶಶಿಧರ್ ಅವರು ಬೆಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೋಟರು ಸೈಕಲ್ ನಲ್ಲಿ ತುಮಕೂರಿನಿಂದ ಹೆಗ್ಗೆರೆಯಲ್ಲಿರುವ ತಮ್ಮ ವಾಸದ ಮನೆಗೆ ಹೋಗುತ್ತಿದ್ದರು. ಈ ವೇಳೆಯಲ್ಲಿ ಗೋಲ್ಡನ್ ಶಾಹಿನ್  ಕಾಲೇಜು ಬಳಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ ರಾಡ್ ತೋರಿಸಿ ಬೆದರಿಸಿ 1,500 ಹಣ, ಒಂದು ಮೊಬೈಲ್ ಹಾಗೂ ಅವರ ಬಳಿ ಇದ್ದ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಬಲೆ ಬೀಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ವಿ ಮರಿಯಪ್ಪ, ಅಬ್ದುಲ್ ಖಾದರ್ ಮತ್ತು ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ  ವಿಶೇಷ ತಂಡ ಅಕಾಡಕ್ಕೆ ಇಳಿದಿತ್ತು.

ಈ ವೇಳೆ ಆರೋಪಿಗಳಾದ ಆಸಿಫ್ ಅಹಮದ್, ಸೈಯದ್ ಅಲೀಮ್ ಮತ್ತು ನಜೀರ್ ಅಹಮದ್ ಎಂಬುವರನ್ನು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಸುಲಿಗೆ ಮಾಡಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಅಶೋಕ್ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments