Thursday, December 12, 2024
HomeಕೃಷಿLLM scheme Poultry Farming | ಕೋಳಿ ಫಾರ್ಮ್ ಸ್ಥಾಪನೆಗೆ ಸರ್ಕಾರದಿಂದ ಸಿಗುತ್ತೆ 25 ರಿಂದ...

LLM scheme Poultry Farming | ಕೋಳಿ ಫಾರ್ಮ್ ಸ್ಥಾಪನೆಗೆ ಸರ್ಕಾರದಿಂದ ಸಿಗುತ್ತೆ 25 ರಿಂದ 30 ಲಕ್ಷ ರೂ ; ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ..?

ಕೃಷಿ ಮಾಹಿತಿ | ರೈತರು ತಮ್ಮ ಕೃಷಿ ಚಟುವಟಿಕೆ (agriculture) ಗಳ ಜೊತೆಗೆ ಉಪಕಸುಬು ಕೂಡ ಮಾಡುತ್ತಾರೆ. ಇದರಿಂದ ಹೆಚ್ಚು ಆದಾಯ (income) ಗಳಿಸಿಕೊಳ್ಳಲು ಸಾಧ್ಯವಿದೆ. ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಯುವಕರು ಕೂಡ ಇಂದು ಕೃಷಿ (Agriculture) ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

Jersey cow | ಹಸು ಸಾಕಬೇಕು ಎನ್ನುವ ರೈತರಿಗೆ ತಜ್ಞರು ಜರ್ಸಿ ಹಸುವನ್ನೇ ಯಾಕೆ ಸಲಹೆ ನೀಡ್ತಾರೆ ಗೊತ್ತಾ..? – karnataka360.in

ಕೋಳಿ ಫಾರ್ಮ್, ಪಶು ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಮೊದಲಾದ ಉದ್ಯಮವನ್ನು ಆರಂಭಿಸಿ ಕೈತುಂಬ ಆದಾಯ ಗಳಿಸುತ್ತಿದ್ದಾರೆ, ಹಾಗೆ ನೀವು ಕೂಡ ನಿಮ್ಮ ಸ್ವಂತ ಉದ್ಯಮ (own business) ಆರಂಭಿಸಬೇಕು, ಅದರಲ್ಲೂ ಕೋಳಿ ಫಾರ್ಮ್ ಒಂದನ್ನು ಶುರು ಮಾಡಬೇಕು ಅಂದುಕೊಂಡಿದ್ದರೆ ಇದಕ್ಕೆ ಸರ್ಕಾರ ಸಂಪೂರ್ಣ ಆರ್ಥಿಕ ಬೆಂಬಲ ನೀಡಲಿದೆ.

ಕೋಳಿ ಫಾರ್ಮ್ ಸ್ಥಾಪನೆಗೆ 25 ರಿಂದ 30 ಲಕ್ಷ ರೂ ಸಹಾಯ

ಇದು ಎಲ್ಎಲ್ಎಂ ಯೋಜನೆಯಾಗಿದ್ದು ಇದರ ಅಡಿಯಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಹಣವನ್ನು ಸರ್ಕಾರದಿಂದ ಕುರಿ ಮತ್ತು ಕೋಳಿ ಫಾರ್ಮ (Poultry Farming) ಆರಂಭಿಸುವವರಿಗೆ ನೀಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸುವ ಯುವಕ ಯುವತಿಯರನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎನ್ನಬಹುದು.

ಎಲ್ಎಲ್ಎಂ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

ಬಹುತೇಕ ಎಲ್ಲಾ ರೈತರು ಕೂಡ ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ಸಾಧ್ಯವಿದ್ದು ಇದಕ್ಕೆ ಬೇಕಾಗಿರುವ ದಾಖಲೆಗಳನ್ನು ನೋಡುವುದಾದರೆ, ಆಧಾರ್ ಕಾರ್ಡ್, ಸ್ವಂತಭೂಮಿ ಹೊಂದಿದ್ರೆ ಭೂಮಿಯ ಪತ್ರ, ಬಾಡಿಗೆ ಭೂಮಿಯನ್ನು ಪಡೆದುಕೊಂಡಿದ್ದರೆ ಕರಾರು ಪತ್ರ, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ನೀವು ಎಲ್ಲಿ ಫಾರ್ಮ್ ಆರಂಭಿಸುತ್ತೀರೋ ಅಲ್ಲಿಯ ಜಿಪಿಎಸ್ ಚಿತ್ರಣ.

ಈ ಕ್ಷೇತ್ರದಲ್ಲಿ ತರಬೇತಿ ಹೊಂದಿರುವ ಅಥವಾ ಕ್ಷೇತ್ರದಲ್ಲಿ ದುಡಿದಿರುವ ಅನುಭವ ಇರಬೇಕು ಹಾಗೂ ಅದರ ದೃಡೀಕರಣ ಪ್ರಮಾಣ ಪತ್ರ ಬೇಕು. ಇದರ ಜೊತೆಗೆ ಪಕ್ಕ ನಿವಾಸದ ವಿಳಾಸ ಕೊಡಬೇಕು. ಇಷ್ಟು ದಾಖಲೆಗಳು ಇದ್ರೆ ನೀವು ಕೂಡ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು

ಅರ್ಜಿ ಸಲ್ಲಿಸುವುದು ಹೇಗೆ..?

ಎಲ್ಎಲ್ಎಂ ಯೋಜನೆಯು 25 ರಿಂದ 30 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಒದಗಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಬಹುದು. ಇನ್ನು https://nlm.udyamimitra.in/Login/Logi ಈ ಅಧಿಕೃತ ವೆಬ್ಸೈಟ್ ಮೂಲಕವೂ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments