ಧಾರವಾಡ | ಧಾರವಾಡ (Dharwad) ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಸಂಗಪ್ಪ ಕಡಲೆ (Sangappa Kadale) ಎಂಬುವವರಿಗೆ ಸೇರಿದ ಎರಡು ಬಣವೆಗಳಿಗೆ ಆಕಸ್ಮಿಕ ಬೆಂಕಿ (Accidental fire) ತಗಲು ಅಂದಾಜು 70 ಸಾವಿರ ಮೌಲ್ಯದ ಮೇವು ಸುಟ್ಟ ಕರಕಲಾಗಿದೆ.
ಏಕಾಏಕಿ ಎರಡೂ ಬಣವೆಗಳಿಗೆ ಬೆಂಕಿ ತಗುಲಿದ್ದು, ವಿಷಯ ಗೊತ್ತಾದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿ ನಿಯಂತ್ರಣಕ್ಕೆ ಬರದೇ ಹೋಗಿದ್ದರಿಂದ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದ ಸವದತ್ತಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಇನ್ನೂ ಘಟನೆಯಿಂದ ರೈತ ಸಂಗಪ್ಪ ಅವರಿಗೆ ಸೇರಿದ ಮೇವು ಸುಟ್ಟು ಕರಕಲಾಗಿದ್ದು, ರೈತ ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.