ತುಮಕೂರು | ಲೊಕೊ ಪೈಲಟ್ (Loco Pilot) ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ, ರೈಲು (Train) ಮಾರ್ಗದಲ್ಲಿ ವಿದ್ಯುತ್ ಲೈನ್ (Power line) ಕಟ್ ಆಗಿ ಕೆಳಗಿ ಬಿದ್ದಿತ್ತು, ವಿದ್ಯುತ್ ಲೈನ್ ಕಂಡು ರೈಲು ನಿಲ್ಲಿಸಿದ ಲೊಕೊ ಪೈಲಟ್ (Loco Pilot) ಸಾವಿರಾರು ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ.
ಲೊಕೊ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಕುಣಿಗಲ್ (Kunigal) ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಕುಣಿಗಲ್ ಬಳಿ ರೈಲ್ವೆ ಟ್ರಾಕ್ ನಲ್ಲಿ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್ ಬಿದ್ದಿತ್ತು. ವಿದ್ಯುತ್ ಲೈನ್ ಕಟ್ ಆಗಿರೋದು ನೋಡಿದ ತಕ್ಷಣ ಲೊಕೊ ಪೈಲೆಟ್ ಟ್ರೈನ್ ನಿಲ್ಲಿಸಿದ್ದಾರೆ.
ಟ್ರೈನ್ ಸ್ವಲ್ಪ ಮುಂದೆ ಸಾಗಿದ್ರು ಶಾಕ್ ನಿಂದ ಹೊತ್ತಿ ಉರಿಯೋ ಸಾಧ್ಯತೆಯಿತ್ತು, ಸಾವಿರಾರು ಜನ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುತ್ತಿತ್ತು. ಆದರೆ, ಲೊಕೋಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನುಹುತ ತಪ್ಪಿದೆ. ಲೊಕೊ ಪೈಲೆಟ್ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.