ಬೆಂಗಳೂರು | ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalta Ambarish) ರನ್ನ ಅವರ ಜೆಪಿನಗರದ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ (Vijayendra) ಭೇಟಿ ಮಾಡಿ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ, ಮಾಧ್ಯಮದೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ಮಂಡ್ಯದಲ್ಲಿ (Mandya) ಬಿಜೆಪಿ ಸೀಟ್ ಉಳಿಸಿಕೊಂಡಿದ್ರೆ ಒಳ್ಳೇ ಫೈಟ್ ಕೊಡಬಹುದಿತ್ತು, ಬೇರೆ ಪಕ್ಷದಿಂದಲೂ ಆಫರ್ ಬಂದಿದೆ, ಬೆಂಬಲಿಗರನ್ನ ಕೇಳದೆ ಯಾವುದೇ ತಿರ್ಮಾನಗಳನ್ನ ತೆಗೆದುಕೊಳ್ಳುವುದಿಲ್ಲವೆಂದು ಎಂದು ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮಂಡ್ಯ ರಾಜಕೀಯ ಯಾವಾಗಲೂ ಸದ್ದು ಮಾಡುತ್ತಿರುತ್ತದೆ, ಸದ್ಯ ಸಮಲತಾ ಅಂಬರೀಶ್ ರವರಿಗೆ ಬಿಜೆಪಿ ಪಕ್ಷದ ಮಂಡ್ಯ ಟಿಕೆಟ್ ಕೈತಪ್ಪಿದ್ದು, ಈ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮನೆಗೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ವಿಜಯೇಂದ್ರ ಭೇಟಿಯಾಗಿ ಒಂದು ಗಂಟೆ ಮಾತನಾಡಿದ್ದೇವು, ಅವರ ಭಾವನೆ ನಿರೀಕ್ಷೆ ವ್ಯಕ್ತಪಡಿಸಿದ್ರು ಪಾರ್ಟಿಗೆ ಸಹಕಾರ ಬೇಕು ಅಂದ್ರು, ಬೆಂಬಲಿಗರನ್ನು ಕೇಳದೇ ಯಾವುದೇ ನಿರ್ಧಾರ ತೋಗೋಳಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಬಿಜೆಪಿ ಸಪೋರ್ಟ್ ಅನ್ನೋದು ಒಂದು ಕಡೆ, ಆದ್ರೇ ನನ್ನ ಆದ್ಯತೆ ನನ್ನ ಬೆಂಬಲಿಗರ ನಿಲುವು ಮುಖ್ಯ, ಮಂಡ್ಯದಲ್ಲೇ ನನ್ನ ನಿಲುವು ಹೇಳತ್ತೇನೆ ನನ್ನ ಅಂತಿಮ ನಿರ್ಧಾರ ಕೆಲವೇ ದಿನಗಳಲ್ಲಿ ಮಂಡ್ಯದಲ್ಲೇ ತಿಳಿಸತ್ತೇನೆ, ಬಿಜೆಪಿ ಸೀಟ್ ಉಳಿಸಿಕೊಂಡ್ರೇ ಒಳ್ಳೆ ಫೈಟ್ ನೀಡಬಹುದಿತ್ತು, ಆಗಿ ಹೋಗಿರೋದನ್ನು ಮಾತಾಡಿ ಪ್ರಯೋಜನವಿಲ್ಲ, ನನ್ನ ನಿಲುವು ತಿಳಿಸತ್ತೇನೆ ಎಂದರು.
ಕುಮಾರಸ್ವಾಮಿ ಪರವಾಗಿ ಕ್ಯಾಂಪೇನ್ ಗೆ ಹೋಗ್ತಿರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ದಿನಗಳಲ್ಲಿ ನನ್ನ ನಿಲುವು ತಿಳಿಸುತ್ತೇನೆ, ನನಗೆ ಹಲವು ಆಫರ್ ಇದ್ದವು, ಬೇರೆ ಪಕ್ಷದಿಂದಲೂ ಸಹ, ಮಂಡ್ಯ ಬಿಟ್ಟು ಎಲ್ಲೂ ನಿಲ್ಲಲ್ಲ, ನನ್ನ ಗುರುತು,ನನ್ನ ಅಸ್ತಿತ್ವ ಮಂಡ್ಯ, ನನಗೆ ಯಾರು ಹತ್ರನೂ ಕೇಳೋ ಅಭ್ಯಾಸ ಇಲ್ಲ, ಇಂದು ಮಧ್ಯಾಹ್ನ 2.30 ಕ್ಕೆ ಬೆಂಬಲಿಗರ ಸಭೆ ಇದೆ, ಸಭೆಯ ನಂತರ ಮುಂದಿನಿ ತಿರ್ಮಾನದ ಬಗ್ಗೆ ಚರ್ಚೆ ನಡೆಸುವುದ್ದಾಗಿ ಹೇಳಿದರು.