ಮನರಂಜನೆ | ಕನ್ನಡದ ಕಿರಾತಕ ಸಿನಿಮಾ (Kirataka movie) ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ತಮಿಳು ನಟ (Tamil actor), ಖಳನಾಯಕ ಡೇನಿಯಲ್ ಬಾಲಾಜಿ (Daniel Balaji) (48) ಶುಕ್ರವಾರ ರಾತ್ರಿ ತೀವ್ರ ಹೃದಯಾಘಾತದಿಂದ (heart attack) ನಿಧನರಾಗಿದ್ದಾರೆ.
Yuva Movie | ಚಿಕ್ಕನಾಯಕನಹಳ್ಳಿ ಶ್ರೀನಿವಾಸ ಚಿತ್ರಮಂದಿರದಲ್ಲಿ ತೆರೆ ಕಾಣದ ‘ಯುವ’ ಸಿನಿಮಾ..! – karnataka360.in
ಬಾಲಾಜಿ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿತ್ತು. ಈ ವೇಳೆ ತಕ್ಷಣ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಹೃದಯಾಘಾತ ಸಂಭವಿಸಿದ್ದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರ ಪಾರ್ಥಿವ ಶರೀರವನ್ನು ಶನಿವಾರ ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟಂಬದವರು ತಿಳಿಸಿದ್ದಾರೆ. ಡೇನಿಯಲ್ ಬಾಲಾಜಿ ಸಾವಿನ ಸುದ್ದಿ ತಮಿಳು ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ.
ದೂರದರ್ಶನದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಬಾಲಾಜಿ ಅವರು, ತಮ್ಮ ಪ್ರತಿಭೆ ಹಾಗೂ ನಟನಾ ಕೌಶಲ್ಯದಿಂದ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದರು. ದೈವಭಕ್ತರಾದ ಡೇನಿಯಲ್ ಬಾಲಾಜಿ ಅವರು ಆವಡಿಯಲ್ಲಿ ದೇವಾಲಯ ಕೂಡ ಕಟ್ಟಿಸುತ್ತಿದ್ದರು ಎನ್ನಲಾಗಿದೆ.