ತುಮಕೂರು | ಲೋಕಸಭೆ ಚುನಾವಣೆಯ (Lok Sabha Elections) ಹಿನ್ನಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕಲು ಚುನಾವಣಾಧಿಕಾರಿಗಳು (Returning Officers) ಮತ್ತು ಪೊಲೀಸರು (Police) ರಾಜ್ಯದೆಲ್ಲೆಡೆ ಚೆಕ್ ಪೋಸ್ಟ್ ಗಳನ್ನು (Check post) ಹಾಕಲಾಗಿದ್ದು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಜೊತೆಗೆ ತೀವ್ರ ತಪಾಸಣೆಯನ್ನು ಕೂಡ ಮಾಡುತ್ತಿದ್ದಾರೆ. ತುಮಕೂರು (Tumkur) ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದು ಬಸ್ಸು, ಕಾರು ಸೇರಿದಂತೆ ಅನುಮಾನ ಬಂದ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ದಾಖಲೆ ಇಲ್ಲದ ಹಣ ಮತ್ತು ಚಿನ್ನ (Money and gold) ಇದೀಗ ಪತ್ತೆಯಾಗಿದೆ.
ಹೌದು,,, ತುಮಕೂರಿನ ಬಟವಾಡಿ ಚೆಕ್ ಪೊಸ್ಟ್ ಬಳಿ ಕಳೆದ ರಾತ್ರಿ KSRTC ಬಸ್ ನಲ್ಲಿ ಹಣ ಹಾಗೂ ಚಿನ್ನ ಸಾಗಾಟ ಪತ್ತೆ ಮಾಡಲಾಗಿದೆ. ಘಟನೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷದ 63 ಸಾವಿರದ 530 ರೂ ಹಾಗೂ 128 ಗ್ರಾಂ ಚಿನ್ನ ಪತ್ತೆಯಾಗಿದ್ದು. ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಬರುತ್ತಿದ್ದ KSRTC ಬಸ್ ಚಲಿಸುತ್ತಿತ್ತು ಎನ್ನಲಾಗಿದೆ.
ಇನ್ನೂ ಆಂದ್ರಪ್ರದೇಶದ ಅನಂತಪುರ ಮೂಲದ ವಾಡ್ಲಾ ನಾಗಭೂಷಣ ಎಂಬಾತನ ಬಳಿಯಿದ್ದ ಬ್ಯಾಗ್ ನಲ್ಲಿ ಹಣ ಮತ್ತು ಚಿನ್ನ ಇದ್ದು ಬಸ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪತ್ತೆಯಾದ ಹಣ ಹಾಗೂ ಚಿನ್ನವನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ತುಮಕೂರಿನ ಎನ್ ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲು ಮಾಡಲಾಗಿದೆ.
ಇದೆ ಚೆಕ್ ಪೋಸ್ಟ್ ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಕಾರನ್ನು ಕೂಡ ತಡೆದು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ನಡೆಸಿದ್ದರು.