ತುಮಕೂರು | ತುಮಕೂರು ಲೋಕಸಭಾ (Tumkur Lok Sabha) ಕ್ಷೇತ್ರದಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಅವರ ಪತ್ನಿ ಭಾರತಿ ಶ್ರೀನಿವಾಸ್ (Bharti Srinivas) ಅವರು ಸ್ಪರ್ಧೆ ಮಾಡುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಸ್ಪಷ್ಟನೆ ನೀಡಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ್, “ಮಹಿಳಾ ಅಭ್ಯರ್ಥಿ ತುಮಕೂರು ಲೋಕಸಭೆಯಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ನಮಗೆ ಖುಷಿಯ ವಿಚಾರ. ನಾವು ಕೂಡ ಎಲ್ಲರಿಗೂ ಸಹಕಾರ ನೀಡುತ್ತೇವೆ. ಅವರ ಗೆಲುವಿಗೆ ಕೆಲಸ ಮಾಡುತ್ತೇವೆ. ಆದರೆ ಭಾರತಿ ಶ್ರೀನಿವಾಸ್ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ನಾವು ಯಾರಿಗೂ ಒತ್ತಡ ಹಾಕಿಲ್ಲ, ಮನವಿ ಕೂಡ ಮಾಡಿಲ್ಲ. ನಮಗೆ ಅಷ್ಟು ಶಕ್ತಿ ಇಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು” ಎಂದು ಹೇಳಿದ್ದಾರೆ.
ಪಕ್ಷದ ಹೈಕಮಾಂಡ್ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಉತ್ತಮ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಹೀಗಿರುವಾಗ ತುಮಕೂರು ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ. ಭಾರತಿ ಶ್ರೀನಿವಾಸ್ ಅವರಿಗೆ ಚುನಾವಣೆಯನ್ನು ಎದುರಿಸುವ ಮತ್ತು ಗೆಲ್ಲುವಂತಹ ಶಕ್ತಿ ಇದೆ. ಹೀಗಾಗಿ ಅವರನ್ನು ಸಚಿಸಿದ್ದಾರೆ.
ಇನ್ನೂ ಎಸ್ ಆರ್ ಶ್ರೀನಿವಾಸ್ ಅವರು ಕೂಡ ಸದ್ಯದ ಮಟ್ಟಿಗೆ ನಮಗೆ ಲೋಕಸಭೆ ಬೇಡ ಎಂದು ಹೇಳುತ್ತಿದ್ದರು ಡಿ ಕೆ ಶಿವಕುಮಾರ್ ಒತ್ತಾಯ ಮಾಡಿದರೆ ಸೈಲೆಂಟಾಗಿ ಚುನಾವಣೆ ಪ್ರಚಾರ ಮಾಡಬಹುದು ಎನ್ನುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.