ತುಮಕೂರು | ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Elections) ಕಾಂಗ್ರೆಸ್ ಪಕ್ಷದಿಂದ ಮಹಿಳಾ ಅಭ್ಯರ್ಥಿಯಾಗಿ (Female candidate) ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಅವರ ಪತ್ನಿ ಭಾರತಿ ಶ್ರೀನಿವಾಸ್ (Bharti Srinivas) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಮತಿ ಭಾರತಿ ಶ್ರೀನಿವಾಸ್ ಅವರು, “ನನಗೂ ಈ ಬಗ್ಗೆ ಏನು ಗೊತ್ತಿಲ್ಲ ಮಾಧ್ಯಮಗಳಲ್ಲಿ ಬಂದ ನಂತರವೇ ನನ್ನ ಗಮನಕ್ಕೂ ಬಂತು. ನನಗೆ ಟಿಕೆಟ್ ನೀಡಬೇಕು ಎಂದು ನಾವು ಮನವಿ ಮಾಡಿಲ್ಲ ಒತ್ತಡವನ್ನು ಹಾಕಿಲ್ಲ ಆದರೆ ಹಿರಿಯ ನಾಯಕರು ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ನಮಗೆ ತಿಳಿಯುತ್ತಿಲ್ಲ. ಡಿ ಕೆ ಶಿವಕುಮಾರ್ ರವರು ನನ್ನ ಬಗ್ಗೆ ಮಾತನಾಡಿರುವುದು ಅವರು ನಮ್ಮ ಮೇಲೆ ಇಟ್ಟಿರುವ ಗೌರವ” ಎಂದು ಅಭಿಪ್ರಾಯಪಟ್ಟರು.
ಇನ್ನು ಈ ಬಗ್ಗೆ ನಾನು ಸ್ಪರ್ಧೆ ಮಾಡುತ್ತೇನೆ ಎಂದಾಗಲಿ, ಸ್ಪರ್ಧೆ ಮಾಡುವುದಿಲ್ಲ ಎಂದಾಗಲಿ ಶ್ರೀಮತಿ ಭಾರತಿ ಶ್ರೀನಿವಾಸ್ ಹೇಳಿಕೆಯನ್ನು ನೀಡಿಲ್ಲ. ಒಟ್ಟಾರೆಯಾಗಿ ಇವುಗಳನ್ನೆಲ್ಲ ಗಮನಿಸುತ್ತಿದ್ದರೆ. ಕೊನೆಯ ಹಂತದಲ್ಲಿ ಯಾವ ರೀತಿಯಾಗಿ ಬೇಕಾದರೂ ಕಾಂಗ್ರೆಸ್ ಅಭ್ಯರ್ಥಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬದಲಾಗಬಹುದು ಎನ್ನುವುದು ಸ್ಪಷ್ಟವಾಗಿದೆ.