ಬೆಂಗಳೂರು | ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪ್ರಮಾಣ. ವಚನ ಸ್ವೀಕಾರ ಸಮಾರಂಭದಲ್ಲಿ ನಿಯೋಜಿತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಜೊತೆಗೆ ಎಂಟು ಮಂದಿ ಹಿರಿಯ ನಾಯಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಮೊದಲ ಹಂತದ ಮಂತ್ರಿ ಸ್ಥಾನದ ಪಟ್ಟಿಗೆ ವರಿಷ್ಠರ ಅನುಮೋದನೆ ಪಡೆದು ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ದಾರೆ.
ಮೊದಲ ಪಟ್ಟಿಯಲ್ಲಿ ಎಂಟು ಮಂದಿಗೆ ಅವಕಾಶ ದೊರೆತಿದ್ದು, ತುಮಕೂರಿನ ಮೂರು ಪ್ರಭಾವಿ ಆಕಾಂಕ್ಷಿಗಳಲ್ಲಿ ಡಾ. ಜಿ. ಪರಮೇಶ್ವರ್ ಅವರನ್ನು ಮೊದಲ ಪಟ್ಟಿಯಲ್ಲಿ ಹೈಕಮಾಂಡ್ ಮಂತ್ರಿ ಸ್ಥಾನ ಒದಗಿಸಿದೆ.
ನೂತನ ಸಚಿವರ ಪಟ್ಟಿ
- ಎಂ.ಬಿ. ಪಾಟೀಲ್ – ಬಬಲೇಶ್ವರ ವಿಧಾನಸಭಾ ಕ್ಷೇತ್ರ, ವಿಜಯಪುರ ಜಿಲ್ಲೆ
- ಡಾ.ಜಿ. ಪರಮೇಶ್ವರ – ಕೊರಟಗೆರೆ ವಿಧಾನಸಭಾ ಕ್ಷೇತ್ರ, ತುಮಕೂರು ಜಿಲ್ಲೆ
- ಕೆ.ಎಚ್.ಮುನಿಯಪ್ಪ – ದೇವನಹಳ್ಳಿ ವಿಧಾನಸಭಾ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಕೆ.ಜೆ. ಜಾರ್ಜ್ – ಸರ್ವಜ್ಙ ನಗರ ವಿಧಾನಸಭಾ ಕ್ಷೇತ್ರ , ಬೆಂಗಳೂರು ನಗರ ಜಿಲ್ಲೆ
- ಸತೀಶ್ ಜಾರಕಿಹೊಳಿ – ಯಮಕನಮರಡಿ ವಿಧಾನಸಭಾ ಕ್ಷೇತ್ರ, ಬೆಳಗಾವಿ ಜಿಲ್ಲೆ
- ಪ್ರಿಯಾಂಕ್ ಖರ್ಗೆ – ಚಿತ್ತಾಪುರ ವಿಧಾನಸಭೆ ಕ್ಷೇತ್ರ, ಕಲಬುರಗಿ ಜಿಲ್ಲೆ
- ಜಮೀರ್ ಅಹಮದ್ ಖಾನ್ – ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ, ಬೆಂಗಳೂರು ನಗರ
- ರಾಮಲಿಂಗ ರೆಡ್ಡಿ – ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ ಕ್ಷೇತ್ರ, ಬೆಂಗಳೂರು ನಗರ