ನವದೆಹಲಿ | 2025ರ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ (2025 Budget) ಮಂಡಿಸಲಿದ್ದಾರೆ. ಈ ಬಜೆಟ್ ಸಂಸತ್ತಿನಲ್ಲಿ ಮಂಡನೆಯಾಗುವವರೆಗೆ, ಅದನ್ನು ಸಿದ್ಧಪಡಿಸಲು ತೊಡಗಿರುವ ಹಣಕಾಸು ಸಚಿವಾಲಯದ ಅಧಿಕಾರಿಗಳು ಕಠಿಣ ನಿಯಮಗಳಡಿಯಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವಿಲ್ಲ, ಯಾವುದೇ ಮಾಹಿತಿ ಸೋರಿಕೆ ತಪ್ಪಿಸಲು ತೀವ್ರ ಭದ್ರತೆ ಕಲ್ಪಿಸಲಾಗುತ್ತಿದೆ.
ನಾರ್ತ್ ಬ್ಲಾಕ್‌ನಲ್ಲಿ ಲಾಕ್‌ಡೌನ್ ವಾತಾವರಣ
ನಾರ್ತ್ ಬ್ಲಾಕ್‌ನಲ್ಲಿ ಬಜೆಟ್ (2025 Budget) ಸಿದ್ಧತೆ ವೇಳೆ ‘ಒಳಗೆ ಬರುವಹಾಗಿಲ್ಲ, ಹೊರಗೆ ಹೋಗುವಹಾಗಿಲ್ಲ’ ಎಂಬಂತೆ ಸಂಪೂರ್ಣ ಲಾಕ್‌ಡೌನ್ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಬಜೆಟ್ ಮುದ್ರಣದವರೆಗೆ ಯಾವುದೇ ಸಿಬ್ಬಂದಿ ಕಚೇರಿಯೊಳಗೆ ಇ-ಮೇಲ್ ಅಥವಾ ಫೋನ್ ಬಳಸುವಂತಿಲ್ಲ. ಕಚೇರಿಯ ಹೊರಗೆ ಯಾರಿಗೂ ಪ್ರವೇಶವಿಲ್ಲ, ಮಾಧ್ಯಮದವರಿಗೂ ತಡೆಯಿದೆ. ಸಿಐಎಸ್ಎಫ್, ದೆಹಲಿ ಪೋಲಿಸ್, ಮತ್ತು ಗುಪ್ತಚರ ಅಧಿಕಾರಿಗಳು ಇದರ ನಿಗಾ ವಹಿಸುತ್ತಿದ್ದಾರೆ.
ಅಧಿಕಾರಿಗಳಿಗೆ 10 ದಿನಗಳ ‘ಸೇರಿ’ ಕೆಲಸ
ಬಜೆಟ್ (2025 Budget) ಸಿದ್ಧತೆಯಾದ ನಂತರ, 10 ದಿನಗಳ ಕಾಲ ಹಣಕಾಸು ಸಚಿವಾಲಯದ ಅಧಿಕಾರಿಗಳು ಬಿಗಿಯಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಸಿಬ್ಬಂದಿ ಅನಾರೋಗ್ಯಕ್ಕೀಡಾದರೂ, ಅವರಿಗೆ ಕಚೇರಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಗೆ ಹೋಗುವ ಅವಕಾಶವೇ ಇಲ್ಲ. ಈ 10 ದಿನಗಳ ಅವಧಿ ‘ಜೈಲು ಶಿಕ್ಷೆ’ ಎನ್ನುವಂತೆ ಕಠಿಣವಾಗಿದ್ದು, ಅವರು ಪ್ರಪಂಚದಿಂದ ಸಂಪೂರ್ಣ ಸಂಪರ್ಕ ಕಳೆದುಕೊಂಡಿರುತ್ತಾರೆ.
ಬಜೆಟ್ (2025 Budget) ದಾಖಲೆಗಳ ಗೌಪ್ಯತೆ
ಬಜೆಟ್ (2025 Budget) ಮುದ್ರಣ ಪ್ರಕ್ರಿಯೆ ಈಗಲೂ ನಾರ್ತ್ ಬ್ಲಾಕ್‌ನ ಮುದ್ರಣಾಲಯದಲ್ಲೇ ನಡೆಯುತ್ತದೆ. 1950ರ ವರೆಗೆ ಈ ಮುದ್ರಣ ರಾಷ್ಟ್ರಪತಿ ಭವನದ ಮುದ್ರಣಾಲಯದಲ್ಲಿ ನಡೆಯುತ್ತಿತ್ತು. ಆದರೆ, ಬಜೆಟ್ ಮಾಹಿತಿ ಸೋರಿಕೆಯಾದ ನಂತರ, ಮುದ್ರಣವನ್ನು ಮಿಂಟೋ ರಸ್ತೆಯ ಸರ್ಕಾರಿ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಯಿತು. 1980ರಿಂದ ನಾರ್ತ್ ಬ್ಲಾಕ್‌ನಲ್ಲಿಯೇ ಮುದ್ರಣ ಪ್ರಕ್ರಿಯೆ ನಡೆಯುತ್ತಿದೆ.
ಸೀಕ್ರೆಟ್ ಡಾಕ್ಯುಮೆಂಟ್
ಬಜೆಟ್ (2025 Budget) ದಾಖಲೆಯು ಅಧಿಕೃತ ರಹಸ್ಯ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದರಿಂದ, ಸಂಸತ್ತಿನಲ್ಲಿ ಮಂಡನೆಯಾದ ಬಳಿಕವೇ ಸಾರ್ವಜನಿಕರಿಗೂ ಈ ಮಾಹಿತಿ ಲಭ್ಯವಾಗುತ್ತದೆ. ಬಜೆಟ್ ದತ್ತಾಂಶ ಸೋರಿಕೆಯಾದರೆ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಜೆಟ್ ಸಿದ್ಧತೆಯ ಮೊದಲ ಹಂತದಲ್ಲಿ ‘ನೀಲಿ ಹಾಳೆ’ ತಯಾರಿಸಲಾಗುತ್ತದೆ, ಇದನ್ನು ಆಧಾರವಾಗಿಟ್ಟುಕೊಂಡು ಚರ್ಚೆಗಳು ನಡೆಯುತ್ತವೆ.