Thursday, December 12, 2024
Homeಜಿಲ್ಲೆತುಮಕೂರು10 Rs Coins Banned | ಸಾರ್ವಜನಿಕರಲ್ಲಿ ಗೊಂದಲದ ಗೂಡಾದ 10 ರೂ ನಾಣ್ಯ :...

10 Rs Coins Banned | ಸಾರ್ವಜನಿಕರಲ್ಲಿ ಗೊಂದಲದ ಗೂಡಾದ 10 ರೂ ನಾಣ್ಯ : ತುಮಕೂರು ಜಿಲ್ಲಾಧಿಕಾರಿ ಸ್ಪಷ್ಟನೆ..!

ತುಮಕೂರು | ರಿಸರ್ವ್ ಬ್ಯಾಂಕ್ ಆಫ಼್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಿ ಚಲಾವಣೆಗೆ ತಂದಿರುವ ಹತ್ತು ರೂಪಾಯಿ ನಾಣ್ಯಗಳನ್ನು ಸಾರ್ವಜನಿಕರು, ವರ್ತಕರು,  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ  ಯಾವುದೇ ಅನುಮಾನವಿಲ್ಲದೇ ದಿನನಿತ್ಯದ ವಹಿವಾಟಿನಲ್ಲಿ   ಸ್ವೀಕರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿ  ಕೆ. ಶ್ರೀನಿವಾಸ್ ರವರು ಆದೇಶಿಸಿದ್ದಾರೆ.

Tumkur University Exam Postponement | ಕರ್ನಾಟಕ ಬಂದ್ ಹಿನ್ನಲೆ ತುಮಕೂರು ವಿವಿ ಪರೀಕ್ಷೆಗಳು ಮುಂದೂಡಿಕೆ..! – karnataka360.in

 ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾಧಿಕಾರಿಗಳ  ಕಚೇರಿಯ ಸಭಾಂಗಣದಲ್ಲಿ  ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ರೂಪಾಯಿಯ ನಾಣ್ಯವನ್ನು  ಎಲ್ಲರೂ  ನಿರಾತಂಕವಾಗಿ ವ್ಯವಹಾರದಲ್ಲಿ ಬಳಸಬಹುದಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಹತ್ತು ರೂಪಾಯಿಯ‌ ನಾಣ್ಯಗಳ ಬಳಕೆಯನ್ನು ಆರ್.ಬಿ.ಐ.  ಹಿಂಪಡೆದಿಲ್ಲವಾದ್ದರಿಂದ ಇದರ ಕುರಿತಾದ ಸುಳ್ಳು ಸುದ್ದಿಗಳನ್ನು, ವದಂತಿಗಳನ್ನು  ನಂಬದಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ  ಜಿಲ್ಲಾಧಿಕಾರಿಗಳು ಹತ್ತು ರೂಪಾಯಿಯ ನಾಣ್ಯಗಳ ಬಳಕೆಯಿಂದಾಗಿ  ಸಾಕಷ್ಟು ಚಿಲ್ಲರೆ ಸಮಸ್ಯೆ ನೀಗುವುದರ ಜೊತೆಗೆ  ಬಳಸದೇ ಇರುವ ನಾಣ್ಯಗಳಿಂದಾಗಿ ಸಾಕಷ್ಟು ಮೊತ್ತದ ಹಣ‌ ದಿನನಿತ್ಯದ ವ್ಯವಹಾರಕ್ಕೆ ಚಲಾವಣೆಯಾಗದೇ  ನಿಂತ ನೀರಿನಂತಾಗಿ ಆರ್ಥಿಕ ಅಭಿವೃದ್ಧಿಗೆ ತೊಡಕಾಗುತ್ತದೆಯಾದ್ದರಿಂದ ಈ ಕೂಡಲೇ ‌10 ರೂಪಾಯಿಯ ನಾಣ್ಯಗಳನ್ನು,  ಚಲಾವಣೆಯಲ್ಲಿರುವ ಇತರೆ ಕರೆನ್ಸಿ ಅಥವಾ ನಾಣ್ಯಗಳಂತೆಯೇ  ಪರಿಗಣಿಸಿ ಸ್ವೀಕರಿಸಬೇಕು ಎಂದು  ಆದೇಶಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ,  ಅರ್.ಬಿ.ಐ.  ಹತ್ತು ರೂಪಾಯಿಯ‌ ನಾಣ್ಯಗಳನ್ನು ಚಲಾವಣೆಯಿಂದ‌ ಹಿಂಪಡೆದಿಲ್ಲ, ಅವು ಶಾಸನಬದ್ದವಾಗಿರುವುದರಿಂದ ಎಲ್ಲರೂ ಅದನ್ನು ಬಳಸಬೇಕೆಂದು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಸಾರ್ವಜನಿಕರಲ್ಲಿ ಸಾಕಷ್ಟು ಬಾರಿ ಜಾಗೃತಿಯನ್ನುಂಟು ಮಾಡಿದ್ದರೂ ಸಹ ಈಗಲೂ ಅವುಗಳನ್ನು ಸ್ವೀಕರಿಸುವ ಬಗ್ಗೆ  ಅನುಮಾನಿಸುತ್ತಿರುವುದು ಸರಿಯಲ್ಲ. ಈ‌ ಬಗ್ಗೆ ಅನಗತ್ಯ ವದಂತಿಗಳಿಗೆ ಕಿವಿಕೊಡದೇ ಆರ್.ಬಿ.ಐ ಹಾಗೂ ಜಿಲ್ಲಾಧಿಕಾರಿಗಳ  ಆದೇಶದ ಮೇರೆಗೆ ಸಾರ್ವಜನಿಕರು  ತಮ್ಮ‌ ವಹಿವಾಟಿನಲ್ಲಿ ಹತ್ತು ರೂಪಾಯಿಯ ನಾಣ್ಯಗಳನ್ನು ಕಾನೂನುಬದ್ದವಾಗಿ ಸ್ವೀಕರಿಸುವುದನ್ನು ಮುಂದುವರೆಸಬೇಕು ಎಂದು  ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments